ನಮಸ್ಕಾರ . ಇದು ನಾನು ಅಂತರ್ಜಾಲದಲ್ಲಿ ಬರೆಯುತ್ತಿರುವ ಮೊದಲ ಕನ್ನಡ ಲೇಖನ. ಬಹಳ ದಿನಗಳಿಂದ ಬ್ಲಾಗ್ ಬರೆಹದಲ್ಲಿ ತೊಡಗೋಣ ಅಂತ ಯೋಚಿಸ್ತಾಯಿದ್ದೆ . ಆದರೆ ಹೇಗೆ ಅಂತ ತಿಳಿದಿರ್ಲಿಲ್ಲ. ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಾಡಿದ ಅನಂತರ ಕೆಲವು ಬ್ಲಾಗಿಂಗ್ ಕುರಿತ ಉಪಯುಕ್ತ ಮಾಹಿತಿಗಳು ದೊರೆತವು .ಸರಿ ನಂದೂ ಒಂದು ಬ್ಲಾಗ್ ಇರ್ಲಿ ಅಂತ ಲ್ಯಾಪ್ಟಾಪ್ ಮುಂದೆ ಕುಟ್ತಾ ಇದ್ದೇನೆ :-).
ಪದವಿ ಮುಗ್ಸಿ ಎರಡು ವರ್ಷ ಆಯ್ತು. ಸರಿಯಾದ ಉದ್ಯೋಗ ಅಂತೂ ಸಿಕ್ತ ಇಲ್ಲ.ಮತ್ತೇನ್ಮಾಡೋದು ಈ ಬೆಂಗ್ಳುರಲ್ಲಿ. ಪಾರ್ಟ್ ಟೈಮ್ ಕೆಲ್ಸನೆ ಗತಿ. ಪ್ರತಿ ದಿನ ಜಾಬ್ ಹುಡುಕೋದ್ರಲ್ಲೇ ಸಮಯ ಹೋಗ್ತಾ ಇದೆ. ಪ್ರತಿ ದಿನ ಮೇಲ್ ಬಾಕ್ಸ್ಗೆ ಒಂದಷ್ಟು ರೆಕಮೆಂಡೇಡ್ ಜಾಬ್ಸ್ ಬಂದು ಬೀಳತ್ತೆ. ಯಾವದೂ ಕೂಡ ನನ್ನ ಜಾಬ್ ಪ್ರೊಫೈಲ್ಗೆ ಸರಿ ಹೊಂದೋದೇ ಇಲ್ಲ..ಮತ್ತೇನ್ಮಾಡೋದು ಸಮಯ ಹಾಳು ಮಾಡೋದು ಅಂದ್ರೆ ಬೇಜಾರಾಗತ್ತೆ :-( ..
ಕೆಲ ದಿನ ಹಿಂದೆ ಒಂದು ವಾಟ್ಸಪ್ ಸಂದೇಶ ಓದಿದ್ದೆ. ಅದರ ಸಾರಾಂಶ ಏನಂದ್ರೆ, ನಮ್ಮ ಬದುಕು ಸಂಪೂರ್ಣವಾಗಿ ಸಮಯವನ್ನು ಅವಲಂಬಿಸಿದೆ ಅಂತ. ಬಹಳ ಅರ್ಥಪೂರ್ಣವಾಗಿತ್ತು ಕೆಲವರಿಗೆ ಶಿಕ್ಷಣ ಮುಗಿದ ಕೂಡಲೇ ಉದ್ಯೋಗ ಸಿಗತ್ತೆ. ಹಲವರಿಗೆ ಎಷ್ಟು ಪ್ರಯತ್ನಿಸಿದ್ರು ಕೆಲಸ ಸಿಗೋದೇ ಇಲ್ಲ. ಯಾಕೆ ಅಂತ ಅರ್ಥಾನೇ ಆಗೋದಿಲ್ಲ. ಪ್ರತಿದಿನ, ಜಾಬ್ ಸಿಗ್ತಾ ಅಂತ ಕೇಳೋ ಸಂಬಂಧಿಕರು, "ಮಗಾ ಯಾವದಾದ್ರೊಂದು ಜಾಬ್ಗೆ ಸೇರ್ಕೊಳ್ಳೋ" ಅಂತ ಹೇಳೋ ಗೆಳೆಯರು.ಹೇಳೋಕೆ ಸುಲಭ.ಜಾಬ್ ಇಲ್ಲದಿರೋ ಪಾಡು ದೇವ್ರಿಗೆ ಪ್ರೀತಿ. ಬೆಂಗಳೂರಲ್ಲಿ ಕೆಲಸಕ್ಕೇನೂ ಬರ ಇಲ್ಲ. ಆದ್ರೆ ನಾವು ಹೊಂದಿರೋ ವಿದ್ಯಾರ್ಹತೆಗೆ ಸರಿಯಾದ ಉದ್ಯೋಗ ಸಿಗೋದಿಲ್ಲ ಅಂತ ಬೇಜಾರು. ಎಲ್ಲೋ ಒಂದು ಮೂವತ್ತು ಶೇಕಡ ಮಂದಿಗೆ ಮಾತ್ರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ದೊರೆಯುತ್ತೆ. ಮತ್ತೆಲ್ಲಾ ಓದೋದು ಒಂದು ಮಾಡೋದು ಮತ್ತೊಂದು. ನಿಧಾನಕ್ಕೆ ಅರ್ಥ ಆಗ್ತಿದೆ. ಏನಂದ್ರೆ ಈ ಸಮಾಜದಲ್ಲಿ ಬದುಕೋದಕ್ಕೆ ಯಾವ ಕೆಲಸ ಆದ್ರೆ ಏನು.. ಅನುಭವ ಮುಖ್ಯ. ಸರಿ ಬರ್ತೀನಿ. ಮಾಡೋಕೆ ತುಂಬಾ ಕೆಲಸ ಇದೆ. ಅದು ಬಿಟ್ಟು ಸುಮ್ನೆ ನಿಮ್ಮತಲೆ ತಿಂತಾ ಇದ್ದೇನೆ. ಬೇಜಾರು ಮಾಡ್ಬೇಡಿ. ಬರ್ಲಾ.. ☺

No comments:
Post a Comment